← ಗ್ಯಾಲರಿಗೆ ಹಿಂತಿರುಗಿ

ಕೇಂದ್ರದ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ ಗಾಗಿ ನಡೆದ ಹೋರಾಟ

ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದು ಎಂಬುದು ಕರ್ನಾಟಕದ ಹೋರಾಟದ ಮಹತ್ವದ ಅಧ್ಯಾಯವಾಗಿದೆ. ಹಲವು ವರ್ಷಗಳಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದ ಈ ವ್ಯವಸ್ಥೆಯನ್ನು ಪ್ರಶ್ನಿಸಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಹೋರಾಟ ನಡೆಸಿತು.

ಪರೀಕ್ಷೆಗಳು ಸಂಪೂರ್ಣವಾಗಿ ಇತರ ಭಾಷೆಗಳಲ್ಲಿ ನಡೆಯುತ್ತಿರುವುದರಿಂದ, ರಾಜ್ಯದ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿತ್ತು. ಇದನ್ನು ವಿರೋಧಿಸಿ, ಕನ್ನಡವನ್ನು ರೈಲ್ವೆ ಪರೀಕ್ಷೆಯ ಅಧಿಕೃತ ಭಾಷೆಯಾಗಿ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆಗಳು, ಜಾಗೃತಿ ಅಭಿಯಾನಗಳು ಮತ್ತು ಒತ್ತಡದ ಹೋರಾಟಗಳು ನಡೆಯಿತು.

ಈ ಹೋರಾಟದ ಫಲವಾಗಿ, ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಸ್ಥಾನ ದೊರೆಯಿತು. ಇದು ಕೇವಲ ಒಂದು ಪರೀಕ್ಷೆಯ ಜಯವಲ್ಲ, ಇದು ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳಿಗಾಗಿ ನಡೆದ ಐತಿಹಾಸಿಕ ಗೆಲುವಾಗಿದೆ.